24 ಗಂಟೆಗಳಲ್ಲಿ ನಡೆಯುವ ಪತ್ತೇದಾರಿ ಕಾದಂಬರಿ ಪೂರ್ಣಚಂದ್ರ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು.
ಏಲಕ್ಕಿ ಮೂಟೆ ಮಾರಲು ಬಸ್ಸಿನಲ್ಲಿ ಪಯಣಿಸುವ ಸುರೇಶ್ ಮತ್ತು ಗೌರಿ ದಂಪತಿಗಳು ತಮಗೆ ಅರಿವೇ ಇಲ್ಲದಂತೆ ಜುಗಾರಿ ಕ್ರಾಸಿನ ಭೂಗತ ಲೋಕದ ಸುಳಿಯೊಳಗೆ ಸಿಲುಕಿ, ಪ್ರಾಣಕ್ಕೆ ಬಂದ ಕುತ್ತನ್ನು ದಾಟಲು ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆ ಅವರಿಗೆ ಸಹಾಯ ಮಾಡಲು ಬಂದಂತೆ ಕಾಣುವ ಮನ್ಮಥ ಬೀಡಾ ಅಂಗಡಿಯ ಶೇಷಪ್ಪ ಹಾಗೂ ಸುರೇಶನ ಕಾಲೇಜು ದಿನಗಳ ಸಹಪಾಠಿ ರಾಜಪ್ಪ ತಮ್ಮ ನಿಗೂಢ ನಡವಳಿಕೆಯಿಂದ ಸುರೇಶ ಮತ್ತು ಗೌರಿಯ ಮನದಲ್ಲಿ ಅನುಮಾನದ ಸುಳಿಯನ್ನೇ ಎಬ್ಬಿಸಿದ್ದಾರೆ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ಗೊಂದಲದಲ್ಲಿರುವ ಈ ದಂಪತಿಗಳ ಆತಂಕ ತುಂಬಿದ ರೋಚಕ ಪಯಣದ ನಡುವೆಯೇ ಮಲೆನಾಡು, ಅಲ್ಲಿ ಬದಲಾಗುತ್ತಿರುವ ಜನರ ಜೀವನ, ನಾಶವಾಗುತ್ತಿರುವ ಕಾಡು, ಕಾಣದೆ ಹುದುಗಿರುವ ಕೆಂಪು ರತ್ನಗಳ ನಿಧಿಗಳೆಲ್ಲದರ ವಿವರಗಳನ್ನು ಓದುವಾಗ ಒಂದು ಬೇರೆ ಪ್ರಪಂಚಕ್ಕೆ ಹೋಗುತ್ತದೆ.
ನೂರಾರು ಮರುಮುದ್ರಣ ಕಂಡಿರುವ ಈ ಕೃತಿ ಈಗ ಇಬುಕ್ ರೂಪದಲ್ಲಿ ಎಲ್ಲಿಂದಲಾದರೂ, ಯಾವಾಗ ಬೇಕಾದರೂ ತಮ್ಮ ಮೊಬೈಲಿನಲ್ಲೇ ಓದಲು ಸಾಧ್ಯವಾಗಿಸಿದೆ ಮೈಲ್ಯಾಂಗ್ ಮೊಬೈಲ್ ಆಪ್.
ಪುಟಗಳು: 209
ಈಗ ಓದಿ ಮೈಲ್ಯಾಂಗ್ ಆಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಾದರೂ ನಿಮ್ಮ ಮೊಬೈಲಿನಲ್ಲೇ !