ಖ್ಯಾತ ವಿಜ್ಞಾನ ಸಂವಹನಕಾರ ಜಾನ್ ಗಿಬ್ರಿನ್ ಹೇಳುವಂತೆ, ಕಳೆದ ಶತಮಾನದ ಭೌತಶಾಸ್ತ್ರ ಲೋಕದಲ್ಲಿ ಆದ ಬಹುದೊಡ್ಡ ಸಾಧನೆ ಎಂದರೆ ಅದು ಕ್ವಾಂಟಮ್ ಮೆಕ್ಯಾನಿಕ್ಸ್ನ ಬೆಳವಣಿಗೆ. ಸಾಮಾನ್ಯರ ಅರಿವಿಗೆ ಬಾರದಂತೆ, ಅವರ ಬದುಕನ್ನು ಬದಲಿಸಿರುವ ಸಿದ್ಧಾಂತವಿದು. ಒಂದೀಡಿ ಕೋಣೆಯನ್ನು ತುಂಬುತ್ತಿದ್ದ ಒಂದು ಕಂಪ್ಯೂಟರ್ ಇಂದು ನಮ್ಮ ಅಂಗೈ ಅಗಲವಾಗಿರುವುದರಲ್ಲಿ ಈ ಸಿದ್ಧಾಂತದ ಕೊಡುಗೆ ಸಾಕಷ್ಟಿದೆ ಎಂದರೆ ಅದರ ಆಳ ಅರಿವಾದೀತು.