ನಾವೀಗ ಇಪ್ಪತ್ತೊಂದನೆ ಶತಮಾನದ ಹೊಸ್ತಿಲಲ್ಲಿದ್ದೇವೆ. ನಾವು ಅಂದರೆ ಮಧ್ಯ ವಯಸ್ಸು ದಾಟಿದವರು ಕಳೆದ ಶತಮಾನದ ಮತ್ತು ಮುಂದಿನ ಆಧುನಿಕ ಜನಾಂಗದ ನಡುವಿನ ಕೊಂಡಿಗಳಾಗಿದ್ದೇವೆ. ಬಹಳಷ್ಟು ಹಳೆಯ ಸಂಗತಿಗಳು ನಮ್ಮೊಂದಿಗೇ ಅಳಿಸಿ ಹೋಗಲಿವೆ. ಏಕೆಂದರೆ ಈಗಿನ ಮಕ್ಕಳು ಮೊಬೈಲ್ ಮತ್ತು ಕಂಪ್ಯೂಟರುಗಳನ್ನು ಕೈಯಲ್ಲಿ ಹಿಡಿದಿದ್ದಾರೆ ಎಂಬಂತೆ ಜನ್ಮ ತಾಳುತ್ತಿದ್ದಾರೆ. ನಡೆದೇ ಶಾಲೆಗೆ ಹೋಗುವ, ಮನೆಗೆ ಹೋಗಿ ಸಂಗತಿ ತಿಳಿಸುವ, ಪತ್ರ ಮುಖೇನ ವಿಷಯ ರವಾನಿಸುವ, ಟೆಲಿಗ್ರಾಂ ಕಳಿಸುವ ಕಾಲವಿತ್ತು ಎನ್ನುವುದರ ಅರಿವೇ ಇಲ್ಲದಂತೆ ಬೆಳೆಯುತ್ತಿರುವ ಈಗಿನ ಮಕ್ಕಳು. ಈಗೊಂದು ನಲವತ್ತು ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಹೀಗೆಲ್ಲಾ ಇತ್ತು ಎಂದರೆ ನಂಬಲಾಗದ ಸ್ಥಿತಿ! ಅಂಥವರಿಗೆ `ಮಲೆನಾಡು ಎಂದರೆ ಹೇಗಿರುತ್ತದೆ? ಆದ ನಮ್ಮ ಬದುಕು ಹೇಗಿತ್ತು? ಅದರೊಳಗೂ ಯಾವೆಲ್ಲಾ ರೋಚಕ ಸಂಗತಿಗಳಿರುತ್ತಿದ್ದವು ತಿಳಿಯುವುದಾದರೂ ಹೇಗೆ?' ಇದರಲ್ಲಿ ವಿವರಿಸಿದ ಘಟನೆಗಳ ಚಿತ್ರಣದಿಂದ ಅದರ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಬರಬಹುದು.